ಜಗಳೂರು ಸುದ್ದಿ:ಚುನಾವಣೆ ನೀತಿ ಸಂಹಿತೆಯನ್ವಯ ಹಣಕಾಸು ವ್ಯವಹಾರ ನಡೆಸಬೇಕು ಎಂದು ಚುನಾವಣಾ ಅಧಿಕಾರಿ ಎಸ್.ರವಿ ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಪ್ರಿಂಟಿಂಗ್ ಪ್ರೆಸ್,ಪೆಟ್ರೋಲ್ ಬಂಕ್,ಶಾಮಿಯಾನ ಮಾಲೀಕರ ಸಭೆಯಲ್ಲಿ ಸಭೆಯನ್ನುದ್ದೆಶಿಸಿ ಮಾತನಾಡಿದರು.
ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಪ್ರಿಂಟಿಂಗ್,ಪೆಟ್ರೋಲ್ ಡೀಸೆಲ್,ಶಾಮಿಯಾನ ವ್ಯವಹಾರ ನಡೆಸುವಾಗ ಕಡ್ಡಾಯವಾಗಿ ಚುನಾವಣೆ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು.ಅಲ್ಲದೆ ಸಹಕಾರ ಬ್ಯಾಂಕ್ ಗಳಿಂದ ನೆಫ್ಟ್ ಮೂಲಕ ಹಣ ಪಾವತಿಸಿಕೊಳ್ಳಬೇಕು.ಖರ್ಚು ₹50 ಸಾವಿರ ಮೀರುವಂತಿಲ್ಲ ಮೀರಿದರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರಿಂಟಿಂಗ್ ಪ್ರೆಸ್ ನಲ್ಲಿ ಮುದ್ರಿಸುವ ಕರಪತ್ರಗಳಲ್ಲಿ ಪಬ್ಲಿಷಿಂಗ್ ಹಾಗೂ ತಮ್ಮ ಪ್ರೆಸ್ ನ ಹೆಸರು ಕಡ್ಡಾಯವಾಗಿ ನಮೂದಿಸಬೇಕು ಎಂದರು.
ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಸಂತೋಷ್ ಕುಮಾರ್,ತಾ.ಪಂ ಇಓ ಚಂದ್ರಶೇಖರ್,ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್,ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ ನಾಗಣ್ಣ,ಅರುಣಕುಮಾರ್,ಪೆಟ್ರೋಲ್ ಬಂಕ್ ಮಾಲೀಕ ಖಲಂದರ್, ಶಾಮಿಯಾನ ಮಾಲೀಕರಾದ ಇಕ್ಬಾಲ್ ಖಾನ್,ಟೀಪುಸಾಬ್ ಸೇರಿದಂತೆ ಇದ್ದರು.