By shukradeshe news
editor m.rajappa vyasgondanahalli
Kannada | online news portal |Kannada news online October 7_10_2026
ಭೂತ ಪ್ರೇತ ಮಾಟ ಮಂತ್ರವಾದಿ ಎಂದು ಹೇಳಿಕೊಂಡು ಮುಗ್ದ ಬಡವರ ಅಸಹಾಯಕತೆಯನ್ನ ದುರುಪಯೋಗಪಡಿಸಿಕೊಂಡು ಬಡವರ ರಕ್ತ ಹೀರುವಂತ ಡೋಂಗಿ ಕಪಾಟಿ ಪೂಜಾರಿಗಳಿಗೆ ಹುಲಿಕಲ್ ನಟರಾಜ್ ರವರ ಪವಾಡ ಗುಟ್ಟು ಬಯಲು ಮಾಡುವುದು ಹೇಗೆ ಎಂಬುದನ್ನ
ದಾವಣಗೆರೆ ಹರಿಹರದ ಬಿ.ಕೃಷ್ಣಪ್ಪ ಮೈತ್ರಿವನದಲ್ಲಿ 30 ಯುವಕರಿಗೆ ತರಬೇತಿ ನೀಡಿ ಭಯಮುಕ್ತ ಸ್ವಾಸ್ಥ್ಯ ಸಮಾಜವನ್ನ ಕಟ್ಟಲು ಅವರ ಪವಾಡ ಗುಟ್ಟು ಬಯಲು ಅತ್ಯಂತ ಸಹಕಾರಿಯಾಗಿದೆ . ಜಗಳೂರು ತಾಲ್ಲೂಕಿನ ಮಾನವ ಬಂಧುತ್ವ ವೇದಿಕೆ ಸಂಚಾಲಕರು ಹಾಗೂ ವಕೀಲರಾದ ಮರೆನಹಳ್ಳಿ ಬಸವರಾಜ್. ವಕೀಲರಾದ ತಿಪ್ಪೇಸ್ವಾಮಿ. ಮಹಾಂತೇಶ್.ಯುವ ವಕೀಲ ಒಬಳೇಶ್. ರಪೀಕ್ ಆಹಮದ್ ಸೇರಿದಂತೆ ಪವಾಡ ಬಯಲು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ತರಭೇತಿ ಕಾರ್ಯಗಾರಕ್ಕೆ ಸಾಕ್ಷಿಯಾಗಿದ್ದಾರೆ…
ಈ ಸಂದರ್ಭದಲ್ಲಿ ಖ್ಯಾತ ಪವಾಡ ಗುಟ್ಟು ಬಯಲು ಸಂಶೋಧಕ ಹುಲಿಕಲ್ ನಟರಾಜ್ ಮಾತನಾಡಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ಜನರಲ್ಲಿ ಭಯ ಹುಟ್ಟಿಸಿ, ವಂಚನೆ ಮಾಡುವುದು ಅಥವಾ ಶೋಷಣೆ ಮಾಡುವುದು ಕಾನೂನುಬಾಹಿರ ಮತ್ತು ಗಂಭೀರ ಸಾಮಾಜಿಕ ಅಪರಾಧವಾಗಿದೆ. ಭಾರತೀಯ ಕಾನೂನಿನಲ್ಲಿ ಇಂತಹ ಕೃತ್ಯಗಳನ್ನು ತಡೆಯಲು ಕಠಿಣ ಕ್ರಮಗಳಿವೆ ಎಂದು ಸಿಬಿರಾರ್ಥಿಗಳಿಗೆ ತಿಳಿಸಿದರು.
- ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ (2017): ಕರ್ನಾಟಕದಲ್ಲಿ ಅಮಾನವೀಯ ದುಷ್ಟ ಪದ್ಧತಿಗಳು ಮತ್ತು ಮೂಢನಂಬಿಕೆಗಳ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಇದರ ಪ್ರಕಾರ, ದೇವರ ಹೆಸರಿನಲ್ಲಿ ಜನರನ್ನು ಹೆದರಿಸುವುದು, ಶಾಪ ಅಥವಾ ದೈವಿಕ ಕೋಪದ ಭಯ ಹುಟ್ಟಿಸಿ ಹಣ ಪೀಕPriority ಮಾಡುವುದು, ಅಥವಾ ದೈಹಿಕ-ಮಾನಸಿಕ ಹಿಂಸೆ ನೀಡುವುದನ್ನು ನಿಷೇಧಿಸಲಾಗಿದೆ.
ಆದ್ದರಿಂದ ಯಾರೆ ಮೌಡ್ಯ ಪೂಜಾರಿಗಳು ಸಮಾಜದಲ್ಲಿರುವ ಮುಗ್ದರನ್ನ ಶೋಷಣೆ ಮಾಡಿ ಅವರ ಅಸಹಾಯಕತೆನ್ನ ದುರುಪಯೋಗಪಡಿಕೊಂಡಲ್ಲಿ ಅಂತವರಿಗೆ ಕಾನೂನಿನ ಪ್ರಕಾರ ಆಪರಾಧ ಎಂದಿದ್ದಾರೆ.
