ಶುಕ್ರದೆಸೆ ನ್ಯೂಸ್:- ಚುನಾವಣೆಯಲ್ಲಿ ಮತದಾರರಿಗೆ ನೀಡದೇ ಇಟ್ಟುಕೊಂಡ ನನ್ನ ಹಣ ವಾಪಸ್ ಕೊಡಿ: ಅಂಗಾಲಾಚಿದ ಕೆಸಿ ನಾರಾಯಣಗೌಡ
ಮಂಡ್ಯ: ಚುನಾವಣೆ (Election) ವೇಳೆ ಜನರಿಗೆ ಹಂಚಲು ನೀಡಿದ್ದ ಹಣವನ್ನು ಮತದಾರರಿಗೆ ತಲುಪಿಸದೇ ಯಾರಾದರೂ ಇಟ್ಟುಕೊಂಡಿದ್ದರೆ ವಾಪಸ್ ಕೊಟ್ಟುಬಿಡಿ ಎಂದು ಬಿಜೆಪಿ (BJP) ಪರಾಜಿತ ಅಭ್ಯರ್ಥಿ ಕೆಸಿ ನಾರಾಯಣಗೌಡ ಮನವಿ ಮಾಡಿಕೊಂಡಿದ್ದಾರೆ.
ಮಂಡ್ಯದಲ್ಲಿ ಸೋಮವಾರ ಕೃತಜ್ಞತಾ ಸಭೆಯಲ್ಲಿ ಮಾತಾಡಿದ ಅವರು, ಮತದಾರರಿಗೆ ಹಂಚಲು ಪಡೆದಿದ್ದ ಹಣ ಹಂಚದೇ ಆಪ್ತರಿಂದಲೇ ಮೋಸವಾಗಿದೆ ಎಂದು ಆರೋಪಿಸದ್ದಾರೆ. ಯಾರಾದರೂ ಹಣ ಇಟ್ಟುಕೊಂಡಿದ್ದರೆ ವಾಪಸ್ ಕೊಟ್ಟುಬಿಡಿ ಎಂದು ಅಂಗಾಲಾಚಿದ್ದಾರೆ. ಅಲ್ಲದೇ ಆ ಹಣದಿಂದ ಟ್ರಸ್ಟ್ ಸ್ಥಾಪಿಸಿ ಸಮಾಜ ಸೇವೆಗೆ ವಿನಿಯೋಗಿಸೋಣ ಎಂದು ಕರೆಕೊಟ್ಟಿದ್ದಾರೆ.
ನಾನು ಈ ವಿಚಾರವಾಗಿ ಮಾಹಿತಿ ಪಡೆದಿದ್ದೇನೆ. ಕ್ಷೇತ್ರದ ಹಲವು ಕಡೆಗಳಿಗೆ ನಮ್ಮ ಹಣ ತಲುಪಿಲ್ಲ. ಹಣ ಹಂಚಿಕೆ ಮಾಡದೇ ಇಟ್ಟುಕೊಂಡಿದ್ದರೆ ದಯವಿಟ್ಟು ವಾಪಸ್ ಕೊಡಿ. ಉತ್ತಮ ಕೆಲಸಗಳಿಗೆ ಬಳಸಿಕೊಳ್ಳೋಣ ಎಂದು ಹಣ ಪಡೆದು ಹಂಚದ ಮುಖಂಡರಿಗೆ ಮನವಿಮಾಡಿದ್ದಾರೆ.
ಕ್ಷೇತ್ರದಲ್ಲಿ ಜೆಡಿಎಸ್) ಅಭ್ಯರ್ಥಿ ಹೆಚ್.ಟಿ ಮಂಜು ಅವರು 79,844 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್ ದೇವರಾಜ್ ಅವರು 57,939 ಮತ ಪಡೆದಿದ್ದರೆ ಕೆಸಿ ನಾರಾಯಣಗೌಡ ಅವರು 37,793 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.